ನನ್ನ ಕರ್ಮ

My photo
Moodbidri, karnataka, India

Wednesday, April 20, 2011

ತುಂತುರು ಅಲ್ಲಿ ನೀರ ಹಾಡು.......

ಗಾಢ ನಿದ್ರೆಯಲ್ಲಿದ್ದ ನನಗೆ ಎಲ್ಲಿಂದಲೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ... ಎಂಬ ಹಾಡಿನ ಸಣ್ಣ ಕನಸು. ತತ್ಕ್ಷಣ ಎಚ್ಚರಗೊಂಡ ಈ ಹಾಳು ಜೀವ. ಕನಸನೆಲ್ಲಾ ಛಿದ್ರ ಮಾಡಿದ ಈ "ಎಚ್ಚರಿಕೆ" ಎಂಬ ಭೂತಕ್ಕೆ ಹಿಡಿಶಾಪದೊಂದಿಗೆ ನನ್ನ ರೂಮಿನ ಕಿಟಕಿಯನ್ನು ಸಣ್ಣಕ್ಕೆ ತೆರೆದೆ. ನೂಲಿನಂತೆ ಒಳನುಸುಳಿದ ತಂಗಾಳಿ, ಆ ಚಳಿಗೆ ನಡುಗಿದ ಜೀವ. ಮನಸ್ಸಿಗೊಂದಿಷ್ಟು ಮುದ ನೀಡಿತ್ತು. ಸೂರ್ಯ ಮೂಡಿದರೂ ಏಳಲು ಮೂಡಿಲ್ಲದ ನನ್ನನ್ನು ಈ ತಂಗಾಳಿ ರಿಫ್ರೆಶ್ಗೊಳಿಸಿತ್ತು. ಹೊರಗೆ ಮಳೆ ಸುರಿಯುವ ಸೂಚನೆಯೇ ಈ ತಂಗಾಳಿ ಎಂಬ ಒಂದು ಸಣ್ಣ ಸಂದೇಹದೊಂದಿಗೆ ಕಿಟಕಿಯಿಂದ ಹೊರ ಇಣುಕಿದೆ. ಸಂಶಯ ನಿಜವಾಗುವ ಸ್ಥಿತಿಯಾಗಿತ್ತು ಆ ದೃಶ್ಯ. ಗಾಳಿಯಲ್ಲಿ ತೇಲಿ ಹೊಗುತ್ತಿದ್ದ ಕಾಮರ್ೋಡ ವರುಣ ದೇವನನ್ನು ಹೊತ್ತೊಯ್ಯುತ್ತಿದ್ದಂತೆ ಭಾಸವಾಯಿತು. ಈ ಎಲ್ಲಾ ದೃಶ್ಯಗಳನ್ನು ಕಣ್ಣಲ್ಲಿ ತುಂಬಿಕೊಂಡು ಚಾವಣಿ ಹಾಸಿದ ಮನೆಯ ಅಂಗಳಕ್ಕೆ ಬಂದು ಕುಳಿತೆ. ಟಪ್ ಟಪ್ ಎಂಬ ಸದ್ದು, ಚಾವಣಿ ಮೇಲೆ ಮಳೆ ಹನಿಗಳ ಕಲರವ. ಕಲರವ ಮುಗಿಲು ಮುಟ್ಟಲು ಕೆಲವೇ ಕ್ಷಣಗಳು ಸಾಕಾಯಿತು. ಮರುಕ್ಷಣ ಧಾರಾಕಾರವಾಗಿ ಸುರಿದ ಮಳೆ ಇಳೆಯೊಂದಿಗೆ ಮನವನ್ನೂ ತಣಿಸಿತು. ಮಳೆಯೊಂದಿಗೆ ಜೊರಾದ ತಂಗಾಳಿ ಸುತ್ತಮುತ್ತಲ ಮರಗಿಡಗಳನ್ನು ಮದುಮಗಳು ನಾಚಿಸುವಂತೆ ನಾಚಿಸಲು ಮುಂದಾದವು. ಆಕಾಶದಲ್ಲಿ ಹಾರಾಡುತ್ತಿದ್ದ ಹಕ್ಕಿಗಳು ಮರದ ಮೇಲೆವಿರಮಿಸಿಕೊಂಡು ತಮ್ಮ ಸಂತೊಷವನ್ನು ಚಿಲಿಪಿಲಿಗುಡುವ ಮೂಲಕ ವ್ಯಕ್ತಪಡಿಸಿದ ಮರೆಯಲಾಗದ ಮಧುರ ಕ್ಷಣವದು.