ನನ್ನ ಕರ್ಮ

My photo
Moodbidri, karnataka, India

Sunday, June 26, 2011

ಪೆರ್ಪಿಕಲ್ ಫಾಲ್ಸ್ - ಚಾರಣದಂತಹ ಅನುಭವ


  ಊರಿನ ಹೆಸರೇ ಸ್ವಲ್ಪ ತಲೆಕೆಡಿಸುವಂತದ್ದು,ಹಾಗಿತ್ತು ಆ ಹೆಸರು. ಧರ್ಮಸ್ಥಳದಿಂದ     ಕೊಕ್ಕಡಕ್ಕೆ ಸಾಗುವ ದಾರಿಯಲ್ಲಿ ಸುಮಾರು 10-14 ಕಿ.ಮೀ ಚಲಿಸಿದ ಮೇಲೆ ದಾರಿಯ  ಎರಡನೇ ಸೇತುವೆಯ ಮುಂಚೆ ಸಿಗುವ ಊರಿನ ಹೆಸರೇ "ಪೆರ್ಪಿಕಲ್". ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕಾಣಸಿಗದು ಈ ಊರಿನ ಹೆಸರು ಮತ್ತು ಅಲ್ಲಿಯ ಅದ್ಭುತ ಜಲಪಾತ ಕಾರಣ ಈ ಊರಿನ, ಆ ಸಣ್ಣ ಜಲಪಾತದ ಬಗ್ಗೆ ಬಲ್ಲವರೇ ಬೆರಳಿಣಿಕೆಯಷ್ಟು ಎಂದೇ ಹೇಳಬಹುದು. ಕೇವಲ ಒಂದು ಗೂಡಂಗಡಿ ಇರುವ ಊರಿನ ಬಸ್ಸು ನಿಲ್ದಾಣ. ಬಸ್ಸು ನಿಲ್ದಾಣದಿಂದ ಸ್ವಲ್ಪವೇ ಹೆಜ್ಜೆಯ ದೂರದಲ್ಲಿ ಸಣ್ಣದೊಂದು ಸೇತುವೆ.ಸೇತುವೆಯ ಕೆಳಗೆ ಕಲ್ಲುಗಳ ಮಹಾಸಭೆಯಂತೆ ಗೊಚರಿಸುವ ಕಗ್ಗಲ್ಲುಗಳು. ಅದರ ನಡುವೆ ಕಪಿಲೆಯ (ನದಿಯ ಹೆಸರು) ತುಸು ಬಳುಕೆಯ ನಡಿಗೆ. ಇಷ್ಟು ಆ ಜಾಗದ ಒಂದು ಸಣ್ಣ ಪರಿಚಯ.
                             ಸೇತುವೆಯ ಬದಿಯಿಂದ ನದಿಗೆ ಇಳಿದು ಕಗ್ಗಲ್ಲುಗಳನ್ನು ದಾಟುತ್ತಾ ನದಿಯ ದಾರಿಯಲ್ಲಿ ಸ್ವಲ್ಪ ಪ್ರಯಾಸದ ಪ್ರಯಾಣ. ಪಾಚಿ ಹಿಡಿದ ಕಲ್ಲುಗಳ ಮೇಲೆ ಹಿಡಿತ ತಪ್ಪಿದರೆ ಕೇವಲ ಮೊಣಕಾಲೆತ್ತರದ ನೀರಿಗೇ.........,. ಮೈಯೆಲ್ಲಾ ಕಣ್ಣಾಗಿಸಿಕೊಂಡು ನಡಿಗೆ, ಅಲ್ಲಿಗೆ ಸಣ್ಣದೊಂದು ಜಲಪಾತದ ಇಂಪಾದ ಮೆಲುದನಿ ನಮ್ಮನ್ನು ಆಕಷರ್ಿಸಿತು . ಆಕರ್ಷಣಿಯೆಡೆಗೆ ಪಯಣ , ಆಹಾ !!!! ಸುಂದರ ಕಪಿಲೆಯು ಸುಮಾರು     ಮೂರಾಳೆತ್ತರದಿಂದ ಧುಮುಕುವ ದೃಶ್ಯವದು. ಆ ದೃಶ್ಯವನ್ನು ಕಣ್ಣಾರೆ ಆನಂದಿಸಿಕೊಂಡು ನಾ ಆ ಜಲಪಾತಕ್ಕೆ ಮಾಡಿದ ನಾಮಕರಣವೇ "ಪೆರ್ಪಿಕಲ್ ಫಾಲ್ಸ್" . ಜಲಪಾತದ ಸುತ್ತಮುತ್ತಲಿನ ಪ್ರದೇಶವು ನಿಜವಾಗಿಯೂ ಪ್ರಕೃತಿಯ ಕಲಾಕೃತಿಗೆ ಹಿಡಿದ ಕೈಗನ್ನಡಿ. ಚಂದ್ರನ ಮೇಲೆ ನಡೆದ ಅನುಭವವದು, ವಷರ್ಾನು ವರ್ಷಗಳ ನೀರಿನ ರಭಸಕ್ಕೆ ಕಗ್ಗಲ್ಲುಗಳು ತಾಳಬಾರದ ವಿಚಿತ್ರ, ಕೌತುಕ.         ಹುಚ್ಚುಹಿಡಿಸುವಂತಹ ಕಲಾಕೃತಿಗಳನ್ನು ತಳೆದಿತ್ತು(ಚಿತ್ರ ವೀಕ್ಷಿಸಿ).ಮುಂದೆ ಪಾತಾಳದಂತಹ ಕಲ್ಲಿನ ಕಂದಕಗಳನ್ನು ನಿಮರ್ಿಸಿಕೊಂಡು ಸಾಗಿದ್ದಳು ಕಪಿಲೆ.ಮುಗಿದಿತ್ತು ಚಾರಣದಂತಹ ಆ ಪಯಣ. ಬೇರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಈ ಜಲಪಾತ ವಿಶಿಷ್ಟ ರೀತಿಯಲ್ಲಿ ಮುಂದಿದೆ.
                           ಕೊನೆಯದಾಗಿ ಆ ಜಲಪಾತದ ಹೆಸರು ನಿಜವಾಗಿಯೂ ತಿಳಿದಿಲ್ಲ ಆದರೆ ಚಾರಣದಂತಹ ಪ್ರಯಾಣ ಸುತ್ತಿ ಬಂದು ಬಸ್ಸು ನಿಲ್ದಾಣದ ಬದಿಯ ಗೂಡಂಗಡಿಯ ಹುಳಿ, ಜೀರಿಗೆ ಮೆಣಸು ಸೇರಿಸಿದ ಸೋಡಾ ಶರಬತ್ನ ಖಾರ ಮಾತ್ರ     ಇನ್ನೂ ಮರೆತಿಲ್ಲ.
             

see more photos down in this site itself 

No comments:

Post a Comment